Mail : info@dubaiskssf.com
fb.com/dubaiskssf | twitter.com/dubaiskssf

ಏಪ್ರಿಲ್ 13 ಕ್ಕೆ ಪುತ್ತೂರಿನಲ್ಲಿ ‘ವಿದ್ಯಾರ್ಥಿ ಫೆಸ್ಟ್-2014’

ಪುತ್ತೂರು, ಎ.೪: ಸಮಸ್ತದ ಅಧೀನದ ಪುತ್ತೂರು ರೇಂಜ್ ಜಂ-ಇಯತ್ತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮೆನೇಜ್‌ಮೆಂಟ್ ಅಸೋಸಿಯೇಷನ್ ವತಿಯಿಂದ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ‘ವಿದ್ಯಾರ್ಥಿ ಫೆಸ್ಟ್-2014’ ಹಾಗೂ ಸಮಸ್ತದ ಅಗಲಿದ ನೇತಾರರ ಅನುಸ್ಮರಣಾ ಸಮ್ಮೇಳನವು ಎ.13ರಂದು ಚಾಪಳ್ಳ ಸವಣೂರು ಬದ್ರಿಯಾ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಲಿದೆ ಎಂದು ರೇಂಜ್ ಮದ್ರಸ ಮೆನೇಜ್‌ಮೆಂಟ್‌ನ ಖಜಾಂಚಿ ನ್ಯಾಯವಾದಿ ಕೆ.ಎ. ಸಿದ್ಧೀಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಚಾಪಳ್ಳ ಮಸೀದಿ ಅಧ್ಯಕ್ಷ ಪುತ್ತುಬಾವು ಸವಣೂರು ಧ್ವಜಾರೋಹಣಗೈಯುವರು. ಸಮಾರಂಭವನ್ನು ಸ್ಥಳೀಯ ಖತೀಬ್ ಅಬ್ದುಲ್ಲಾ ಮದನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಎಂ.ತಂಙಳ್ ಸಾಲ್ಮರ ದುಆ ನಡೆಸಲಿದ್ದಾರೆ. ಬಳಿಕ ರೇಂಜ್ ವ್ಯಾಪ್ತಿಯ 43 ಮದ್ರಸಗಳಿಂದ ಆಯ್ಕೆಯಾದ 2 ಸಾವಿರ ವಿದ್ಯಾರ್ಥಿಗಳ ವೈವಿಧ್ಯಮಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭ ಹಾಗೂ ಅನುಸ್ಮರಣಾ ಸಮ್ಮೇಳನ ಸಂಜೆ ನಡೆಯಲಿದ್ದು, ಪುತ್ತೂರು ಮುದರ್ರಿಸ್ ಸೈಯದ್ ಅಹ್ಮದ್ ಪೂಕೋಯ ತಂಙಳ್ ದುಆ ಮಾಡಲಿದ್ದಾರೆ. ಸಮಸ್ತ ಶಿಕ್ಷಣ ಮಂಡಳಿಯ ಕೇಂದ್ರೀಯ ಕಾರ್ಯದರ್ಶಿ ಎಂ.ಎ. ಖಾಸಿಂ ಉಸ್ತಾದ್ ಉದ್ಘಾಟಿಸಲಿಸುವರು ಎಂದವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸ್ವಾಗತ ಸಮಿತಿ ಅಧ್ಯಕ್ಷ ರಫೀಕ್ ಹಾಜಿ ಕೊಡಾಜೆ, ಮದ್ರಸ ಮೆನೇಜ್‌ಮೆಂಟ್ ಪುತ್ತೂರು ರೇಂಜ್ ಅಧ್ಯಕ್ಷ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಉಪಾದ್ಯಕ್ಷ ಹಸೈನಾರ್ ದರ್ಬೆ, ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಅಝಾದ್ ದರ್ಬೆ ಉಪಸ್ಥಿತರಿದ್ದರು  .@ ಕೆ ಎಚ್ ಎ ನಈಮಿ  ಪೋನ್ಮಲ