Mail : info@dubaiskssf.com
fb.com/dubaiskssf | twitter.com/dubaiskssf

ಕೆ ಐ ಸಿ ರಾಷ್ತ್ರೀಯ ಸಮಿತಿಯ 13 ನೇ ವಾರ್ಷಿಕ ಮಹಾ ಸಭೆ.

ದುಬೈ: ಧಾರ್ಮಿಕ ಕ್ಷೇತ್ರದಲ್ಲಿ ಕೌಸರಿ ಹಾಗೂ ಲೌಕಿಕ ಕ್ಷೇತ್ರದಲ್ಲಿ ಬಿ ಎ ಪದವಿಯೊಂದಿಗೆ ಹೊರಬಂದು ಇಸ್ಲಾಮಿನ ನೈಜ ಸಂದೇಶವನ್ನು ಸಮಾಜದ ಮುಂದೆ ತಲುಪಿಸಿ ದಾರಿತಪ್ಪಿ ಸಮಾಜಕ್ಕೆ ಶಾಪವಾಗಬಹುದಾದ ಜನತೆಯನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಅಳಿಲ ಸೇವೆಯನ್ನು ಮಾಡುತ್ತಾ ಬಂದಿರುವ ವಿಧ್ಯಾ ಸಂಸ್ಥೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ – ಜಾಮಿಯ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ . ಸಂಸ್ಥೆಯ ವಿಧ್ಯಾಭ್ಯಾಸದ ಗುಣಮಟ್ಟ ಹಾಗೂ ವಿಧ್ಯಾರ್ಥಿಗಳ ಪಾಂಡಿತ್ಯ ಇಂದು ಇಡೀ ಸಮಾಜದ ಪ್ರಸಂಸೆಗೆ ಪಾತ್ರವಾಗುತ್ತಾ ಬಂದಿದ್ದು ಬೋರ್ಡಿಂಗ್ ಮದ್ರಸ, ಕಂಪ್ಯೂಟರ್ ತರಬೇತಿ, ಕುತುಬ್ಖಾನ, ಧಾರ್ಮಿಕ ಶಿಕ್ಷಣದೊಂದಿಗೆ ಬಿ ಎ ಪದವಿ, ಪಂಚ ಬಾಷೆಗಳಲ್ಲಿ ಪರಿಣತರನ್ನಾಗಿಸಿ ಸಮಾಜಕ್ಕೆ ಉತ್ತಮ ನಾಯಕತ್ವವನ್ನು ನೀಡುವ ಸಮುದಾಯ ಒಂದನ್ನು ಕಟ್ಟುವ ಕೆಲಸವನ್ನು ಸಂಸ್ಥೆ ಮಾಡುತ್ತಾ ಬಂದಿದೆ. ಹೀಗೆ ಕರ್ನಾಟಕದಾದ್ಯಂತ ವಿದ್ಯಾಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಾ ಬಂದಿರುವ ಜಾಮಿಯ ಅಲ್ ಕೌಸರ್ ಶರೀಅತ್ ಕಾಲೇಜ್ ಕುಂಬ್ರ ಇದರ ಮೇಲುಸ್ತುವಾರಿ ಸಮಿತಿ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆಐಸಿ) ರಾಷ್ಟ್ರೀಯ ಸಮಿತಿ ಯು.ಎ.ಇ ಇದರ 13ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ದುಬೈ ಕೆ.ಎಂ.ಸಿ.ಸಿ ಸಭಾಂಗಣದಲ್ಲಿ ನಡೆಯಿತು. ಹಾಲಿ ಅಧ್ಯಕ್ಷರಾದ ಹಾಜಿ ಮೊಯಿದೀನ್ ಕುಟ್ಟಿ ದಿಬ್ಬ ರವರ ಘನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಆಸ್ಕರಲಿ ತಂಙಲ್ ಕೊಲ್ಪೆ ರವರು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಾ, ಪುತ್ತೂರು ತಾಲ್ಲೂಕಿನ ಕುಂಬ್ರ ಗ್ರಾಮದಲ್ಲಿ ಕುರ್ಆನ್ ಕಂಠಪಾಠದೊಂದಿಗೆ ಪ್ರಾರಂಭವಾದ ಈ ಸ್ಥಾಪನೆಯು ಇಂದು ಬಹುದೊಡ್ಡ ಸಾಧನೆಯನ್ನೇ ಮಾಡುತ್ತಾ ಬಂದಿದ್ದು ಕರ್ನಾಟಕದಲ್ಲೇ ಪರಿಚಯಿಸುವಂತಹ ವಿಶಿಷ್ಟ ವಿಧ್ಯಾ ಕೇಂದ್ರವಾಗಿ ಪರಿಣಮಿಸಿದೆ. ಅಲ್ಲದೆ ಪ್ರಭಾಷನ ಲೋಕದಲ್ಲಿ ತಮ್ಮ ಸ್ಥಾಪನೆಯಲ್ಲಿ ಕಲಿತ ವಿಧ್ಯಾರ್ಥಿಗಳು ಮಿಂಚುತ್ತಿದ್ದು ಇದು ತಮ್ಮಂತಹ ನಿಸ್ವಾರ್ಥ ಪ್ರೋತ್ಸಾಹಕರ ಪ್ರತಿಫಲದ ಸಂಕೇತವಾಗಿದೆ ಎನ್ನುತ್ತಾ ಸಹಕರಿಸಿದ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಿದರು. ನೌಶಾದ್ ಫೈಝಿ ಕಣ್ಣೂರ್ ರವರು ದುವಾ ನೆರವೇರಿಸಿ ಮರಳುಗಾಡಿನಲ್ಲಿ ಕಾರ್ಯಾಚರಿಸುತ್ತಿರುವ ಕೆಐಸಿ ಯ ಕಾರ್ಯ ವೈಖರಿ, ತಾಯಿನಾಡಿನಲ್ಲಿರುವ ಸ್ಥಾಪನೆಯ ಗುಣ ಮಟ್ಟವನ್ನು ವಿಶ್ಲೇಷಿಸಿ ಸಂತೋಷ ವ್ಯಕ್ತ ಪಡಿಸಿದರು. ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮಹಮ್ಮದ್ ನೀರ್ಕಜೆಯವರು ಪ್ರಸಕ್ತ ಸಾಲಿನಲ್ಲಿ ಸ್ಥಾಪನೆಗೆ ನೀಡಿದ ಕೊಡುಗೆ, ಸಹಕರಿಸಿದ ರೀತಿ , ಹಾಗೂ ಮುಂದೆ ಇರುವಂತಹ ಕನಸುಗಳನ್ನೊಳಗೊಂಡ ಸವಿಸ್ತಾರವಾದ ವರದಿಯನ್ನು ವಾಚಿಸಿ, ಲೆಕ್ಕ ಪತ್ರಗಳನ್ನು ಸಭೆಯಲ್ಲಿ ಮಂಡಿಸಿದರು. ನಂತರ ಸಭಾಧ್ಯಕ್ಷರಾದ ಮೊಯಿದೀನ್ ಕುಟ್ಟಿ ಹಾಜಿ ಯವರು ಮಾತನಾಡಿ , ದಿನದಿಂದ ದಿನಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನುಗ್ಗುತ್ತಿರುವ ಕೆ ಐ ಸಿ ಸ್ಥಾಪನೆಯನ್ನು ಉತ್ತಮ ರೀತಿಯಲ್ಲಿ ನಡೆಸಿ ಕೊಂಡು ಹೋಗಲು ತಾವೆಲ್ಲರೂ ಸಮಿತಿಯೊಂದಿಗೆ ಕೈಜೋಡಿಸುವಂತೆ ಕೇಳಿಕೊಳ್ಳುತ್ತಾ ಪ್ರಸಕ್ತ ಸಾಲಿನಲ್ಲಿ ಸಹಕರಿಸಿದ ಪ್ರತಿಯೋರ್ವರಿಗೂ ಕೃತಜ್ಞತೆ ಸಲ್ಲಿಸಿ ಹಾಲಿ ಸಮಿತಿಯನ್ನು ಬರಕಾಸ್ತು ಗೊಳಿಸಿದರು. ನಂತರ ಅಬ್ದುಲ್ ಸಲಾಮ್ ಬಪ್ಪಲಿಗೆಯವರು ನೂತನ ಸಮಿತಿಯ ರಚನೆಯ ಜವಾಬ್ದಾರಿ ವಹಿಸಿ ಸದಸ್ಯರ ಪಟ್ಟಿಯನ್ನು ವಾಚಿಸಿದರು, ಅದರಂತೆ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಹಾಜಿ ಮೊಯಿದೀನ್ ಕುಟ್ಟಿ , ತೃತೀಯ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ನೂರ್ ಮಹಮ್ಮದ್ ನೀರ್ಕಜೆಯವರನ್ನು ಸರ್ವಾನುಮತದಿಂದ ಆರಿಸಿ ಸುಮಾರು 40 ಸದಸ್ಯರನ್ನೊಳಗೊಂಡ ಸಮಿತಿಯನ್ನು ರೂಪಿಸಿದರು. ನಂತರ ವೇದಿಕೆಯಲ್ಲಿದ್ದ ಅಬ್ದುಲ್ ಸಲಾಮ್ ಹಾಜಿ ಸುರತ್ಕಳ್, ದುಬೈ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಬೈತಡ್ಕ, ಅಬುಧಾಬಿ ಸಮಿತಿ ಅಧ್ಯಕ್ಷ ಹನೀಫ್ ಆರ್ಯಮೂಲೆ , ಶಾರ್ಜ ಸಮಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಮಣಿಲ , ಮುಹಮ್ಮದ್ ಶಾಫಿ ರಾಸ್ ಅಲ್ ಖೈಮಾ, ಬದ್ರುದ್ದೀನ್ ಹೆಂತಾರ್, ದುಬೈ ಸಮಿತಿ ಪ್ರ. ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೇಗ, ಅಬುಧಾಬಿ ಸಮಿತಿ ಪ್ರ . ಕಾರ್ಯದರ್ಶಿ ಹಾರಿಸ್ ಕಾಂತಡ್ಕ, ಶಾರ್ಜಾ ಸಮಿತಿ ಪ್ರ . ಕಾರ್ಯದರ್ಶಿ ಸಾಜಿದ್ ಆರ್ಲಪದವು ಮೊದಲಾದವರು ಉಪಸ್ತಿತರಿದ್ದು ನೂತನ ಸಮಿತಿಗೆ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಮುಹಮ್ಮದ್ ಶರೀಫ್ ಆಶ್ರಫಿ ರವರು ಕಿರಾಅತ್ ಪಟಿಸಿ , ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಫೀಕ್ ಆತೂರ್ ಸ್ವಾಗತಿಸಿ ವಂದಿಸಿದರು.