ಪುತ್ತೂರು: ಸಯ್ಯಿದ್ ಮಲ್ಹರ್ ವಲಿಯುಲ್ಲಾಹಿ(ಖ.ಸಿ.) ದರ್ಗಾ ಶರೀಫ್ ಕೋಲ್ಪೆ-ನೆಲ್ಯಾಡಿ ಇಲ್ಲಿ ಎ.೪ರಿಂದ ನಡೆಯುತ್ತಿದ್ದ ಕೋಲ್ಪೆ ಮಖಾಂ ಉರೂಸ್ ಇದರ ಸಮಾರೋಪ ಸಮಾರಂಭ ಎ.೭ರಂದು ರಾತ್ರಿ ಕೋಲ್ಪೆ ಬಿ.ಜೆ.ಎಂ.ಸಭಾಂಗಣದಲ್ಲಿ ನಡೆಯಲಿದೆ ಎಂದು ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್, ಪ್ರಧಾನ ಕಾರ‍್ಯದರ್ಶಿ ಎನ್.ಕೆ.ಅಬ್ದುಲ್ ಮಜೀದ್ ಕೋಲ್ಪೆ ಹಾಗೂ ಜೊತೆ ಕಾರ‍್ಯದರ್ಶಿ ಕೆ.ಕೆ.ಇಸ್ಮಾಯಿಲ್ ತಿಳಿಸಿದ್ದಾರೆ.
ಕೊಡಪ್ಪನಕ್ಕಲ್ ಕುಟುಂಬದ ಸುಪುತ್ರ ಸ್ವಾಬಿಕ್ ಆಲೀ ಶಿಹಾಬ್ ತಂಙಳ್ ಪಾಣಕ್ಕಾಡ್, ಕೇರಳ ಇವರು ದುವಾಶೀರ್ವಚನ ನೀಡಲಿದ್ದಾರೆ. ಕೋಲ್ಪೆ ಬಿಜೆಎಂ ಖತೀಬರಾದ ಸಲೀಂ ಫೈಝಿ ಇರ್ಪಾನಿ ಉದ್ಘಾಟಿಸಲಿದ್ದಾರೆ. ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಂಬ್ರಾಣ ಉಸ್ತಾದ್ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬರಾದ ಎಸ್.ಬಿ.ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಬೋಳಿಯಾರ್ ಎಂ.ಜೆ.ಎಂ. ಖತೀಬರಾದ ಉಮ್ಮರ್ ದಾರಿಮಿ ಆತೂರು, ನೆಲ್ಯಾಡಿ ಜುಮಾ ಮಸೀದಿ ಖತೀಬರಾದ ಹಾಜಿ ಅಬೂ ಹನ್ನತ್ ಮುಹಮ್ಮದ್ ಸಖಾಫಿ, ಹೊಸಮಜಲು ಅಲ್ ಮಸ್ಜಿದುಲ್ ಜಲಾಲಿಯ್ಯ ಮಸೀಸಿ ಖತೀಬರಾದ ಅಬೂಬಕ್ಕರ್ ಸಅದಿ, ವಳಾಲು ಜುಮಾ ಮಸೀದಿ ಖತೀಬರಾದ ಹಂಝ ಮುಸ್ಲಿಯಾರ್, ಶಾಫಿ ಸಖಾಫಿ ಅಲ್ ಖಾಮಿಲ್, ಕೆ.ಎಂ.ಹನೀಫ್ ಹಾಜಿ ಕಡಬ, ಅಬ್ದುಲ್ ನಾಸಿರ್ ಹೊಸಮನೆ, ಮುಹಮ್ಮದ್ ಹನೀಫ್ ಸಿಟಿ ನೆಲ್ಯಾಡಿ, ಅಬ್ದುಲ್ ಶುಕೂರ್ ಕೆ.ಜಿ.ಎನ್., ಅಬ್ದುಲ್ ಹಮೀದ್(ಅಸ್ಕಾಫ್), ಯೂಸುಫ್ ಹಲ್ಲಿಂಗೇರಿ, ಪಿ.ಎ.ಉಸ್ಮಾನ್ ಬೆಳ್ಳಾರೆ, ಎಂ.ಎಚ್.ಅಶ್ರಫ್ ಮಲ್ಲಿಗೆಮಜಲು, ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಅಬ್ಬಾಸ್ ಬೋಳದಬೈಲು ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ ಹೊಸಮಜಲು ಜುಮಾ ಮಸೀದಿಯಿಂದ ಸಂದಲ್ ರ‍್ಯಾಲಿ ಕೋಲ್ಪೆ ದರ್ಗಾಕ್ಕೆ ಬರಲಿದೆ. ರಾತ್ರಿ ಉರೂಸ್ ಸಲುವಾಗಿ ಸಾರ್ವಜನಿಕ ಅನ್ನದಾನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. :-ಕೆ .ಎಚ್ ಎ ನಈಮಿ ಪೋನ್ಮಲ




