ಪುತ್ತೂರು : ಕರ್ನಾಟಕ ಇಸ್ಲಾಮಿಕ್ ಸೆಂಟರ್ ಕುಂಬ್ರ, ಪುತ್ತೂರು ಇದರ ಜಾಮಿಯ ಅಲ್ ಕೌಸರ್ ಶರೀಅತ್ ಕಾಲೇಜ್ ಸಭಾಂಗಣದಲ್ಲಿ ಗಲ್ಫ್ ಸಂಗಮ ಕಾರ್ಯಕ್ರಮವು ಇತ್ತೀಚೆಗೆ ನೆರವೇರಿತು. ಕೆ.ಐ.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಆಸ್ಕರಲಿ ತಂಙಲ್ ಕೊಲ್ಪೆ ಯವರು ಇದರ ಅದ್ಯಕ್ಷತೆಯನ್ನು ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಸೌದಿ ಅರೇಬಿಯಾದಿಂದ ಪ್ರತಿನಿಧಿಗಳು ಆಗಮಿಸಿದ್ದು ಸ್ವಾಗತ ಭಾಷಣದಲ್ಲಿ ಕೆ.ಐ.ಸಿ ಡೆವೆಲಪ್ಮೆಂಟ್ ಕಮಿಟಿ ಸಂಘಟನಾ ಕಾರ್ಯದರ್ಶಿಯವರಾದ ಉಸ್ತಾದ್ ಕೆ ಆರ್ ಹುಸೈನ್ ದಾರಿಮಿಯವರು ಕೆ.ಐ .ಸಿ ವಿದ್ಯಾ ಕೇಂದ್ರದ ಹಿನ್ನೆಲೆ, ಇದು ಬೆಳೆದು ಬಂದ ದಾರಿ, ಕ್ಯಾಂಪಸ್ ಆವರಣದಲ್ಲಿ ನೀಡುತ್ತಿರುವ ವಿದ್ಯಾಭ್ಯಾಸದ ಗುಣಮಟ್ಟ ಹಾಗೂ ಯು ಎ ಐ ಯಲ್ಲಿ ಕಾರ್ಯಾಚರಿಸುತ್ತಿರುವ ಕೆ.ಐ.ಸಿ ಸಂಘಟನೆಯ ಕಾರ್ಯವೈಖರಿಯನ್ನು ವಿವರಿಸಿ, ಕೆ.ಐ.ಸಿ ಯ ಕಟ್ಟಡ ಕಾಮಗಾರಿ ಯ ಪುರೋಭಿವೃದ್ಧಿಯಲ್ಲಿ ಇರುವ ಹಲವು ಕುಂದು ಕೊರತೆಗಳನ್ನು ನೀಗಿಸಲು ಸಹಾಯ ಸಹಕಾರವನ್ನು ಕೋರಿದರು.
ಕೆ.ಐ.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಆಸ್ಕರಲಿ ತಂಙಲ್ ಕೊಲ್ಪೆ ರವರು ಮಾತನಾಡಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ “ಕೌಸರಿ”ಗಳೆಂದು ಈ ಸಮುದಾಯಕ್ಕೆ ಪರಿಚಯಿಸಿದ ಕೀರ್ತಿಯನ್ನು ಮೈಗೂಡಿಸಿಕೊಂಡಿರುವ ಈ ಸ್ಥಾಪನೆಯು ಅದೆಷ್ಟೋ ಉಲಮಾ-ಉಮರಾ ಗಳ ಪ್ರಾರ್ಥನೆಯ ಪ್ರತಿಫಲದಿಂದ ಇಂದು ಹೆಮ್ಮರವಾಗಿ ಬೆಳೆದುಬಂದಿದೆ. ಇಲ್ಲಿ ಕಲಿತ ವಿಧ್ಯಾರ್ಥಿಗಳು ಇಂದು ಪ್ರಭಾಷಣ ಲೋಕದಲ್ಲಿ ದಕ್ಷಿಣ ಕನ್ನಡದಲ್ಲಿ ಹೆಸರು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಈ ಸ್ಥಾಪನೆಯ ಉನ್ನತಿಗೆ ನಾವೆಲ್ಲರೂ ಒಂದಾಗಿ ಪ್ರಯತ್ನಿಸ ಬೇಕಾಗಿದೆ ಎಂದರು.
ಈ ಸಂದರ್ಭ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೌದಿ ಅರೇಬಿಯದ ಉದ್ಯಮಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಗುರುತಿಸಲ್ಪಟ್ಟ ಹಾಜಿ ಮೊಹಮ್ಮದ್ ಕುಕ್ಕುವಲ್ಲಿ ಯವರು ಕೆ.ಐ.ಸಿ ಯ ಕಾರ್ಯವೈಖರಿಯನ್ನು , ಕ್ಯಾಂಪಸ್ ನಲ್ಲಿ ನೀಡಲ್ಪಡುತ್ತಿರುವ ಶಿಸ್ತು ಬದ್ದ ವಾದ ಶಿಕ್ಷಣ, ಹಾಗೂ ಕ್ಯಾಂಪಸ್ ಆಡಳಿತ ಸಮಿತಿಯವರ ಪರಿಶ್ರಮವನ್ನು ಮುಕ್ತ ಕಂಠ ದಿಂದ ಅಭಿನಂದಿಸಿದರು.ಇಂತಹ ಉತ್ತಮವಾದ ಶಿಕ್ಷಣ ಕೇಂದ್ರವು ಇಂದು ರಾಜ್ಯಕ್ಕೇ ಮಾದರಿಯಾಗಿದ್ದು ಉಚಿತ ವಿದ್ಯಾಭ್ಯಾಸ ನೀಡುವುದು ಮಹಾ ಕಾರ್ಯವಾಗಿದ್ದು ತಮ್ಮ ಎಲ್ಲಾ ಸಹಾಯ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.
ಇನ್ನೋರ್ವ ಅತಿಥಿ ಸೌದಿ ಅರೇಬಿಯದ, ಝಕರಿಯ್ಯಾ ಕೊರಿಂಗಿಲರವರು ಜಗತ್ತಿನಲ್ಲಿ ಇಂದು ಬೆಲೆ ಕಟ್ಟಲಾಗದ ವಸ್ತು ಒಂದಿದ್ದಲ್ಲಿ ಅದು ಶಿಕ್ಷಣ ವಾಗಿದೆ, ಯಾರಿಂದಲೂ ಕಸಿದು ಕೊಳ್ಳಲು ಸಾಧ್ಯವಾಗದೆ ಪರಿಶ್ರಮ ಪಟ್ಟರೆ ಮಾತ್ರ ಪಡೆಯಬಹುದಾದ ವಸ್ತುವಾಗಿದೆ . ಇಂದು ಮೌಲ್ಯಾಧಾರಿತ ವಿಧ್ಯಾಭ್ಯಾಸವನ್ನು ನೀಡುವ ಸಂಸ್ಥೆಗಳು ತೀರಾ ಕಡಿಮೆಯಾಗಿದ್ದು ಪೈಪೋಟಿ ಯೊಂದಿಗೆ ಸೆಣಸಾಡುವ ವಿದ್ಯಾ ಕೇಂದ್ರ ಗಳು ಇಂದು ಒಂದು ರೀತಿಯ ಉದ್ಯಮವಾಗಿ ಮಾರ್ಪಟ್ಟಿದ್ದು ಇದರ ಮಧ್ಯೆ ಉಚಿತವಾಗಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ಉಚಿತವಾಗಿ ಆಹಾರ ಮತ್ತು ವಸತಿ ಯೊಂದಿಗೆ ನೀಡುತ್ತಾ ಲೌಕಿಕ ವಿದ್ಯಾಭ್ಯಾಸ “ಬಿ.ಎ” ಪದವಿಯೊಂದಿಗೆ ಧಾರ್ಮಿಕ ವಿದ್ಯಾಭ್ಯಾಸ ಕೌಸರಿ ಪದವಿಯನ್ನು ನೀಡಿ ಗೌರವಿಸುವುದು ಪ್ರಶಂಸನೀಯ ತುಂಬಾ ಎಂದು ಕೊಂಡಾಡಿದರು.
ಈ ಸಂದರ್ಭ ಸೌದಿ ಅರೇಬಿಯಾ ದಿಂದ ಆಗಮಿಸಿದ್ದ ಅಬ್ದುಲ್ ಹಮೀದ್ ಕೊಮ್ಮೆಮ್ಮಾರ್ , ಶರೀಫ್ ಕುಕ್ಕುವಲ್ಲಿ , ಲತೀಫ್ ವೈ.ಎಂ.ಕೆ, ಹಾಗೂ ಕೆ.ಐ.ಸಿ ಯು.ಎ.ಇ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್ ನೀರ್ಕಜೆ , ಬಾತಿಷ ಕೊರಿಂಗಿಲ , ಹುಸೈನ್ ರೆಂಜಲಾಡಿ, ಮತ್ತು ನಾಡಿನ ಗಣ್ಯರಾದ, ಇಬ್ರಾಹಿಮ್ ಹಾಜಿ ಬೊಲ್ಲಾಡಿ, ಹಾಜಿ ಬಿ.ಎಸ್ ಅಬ್ಬಾಸ್ ಮದನಿ ಮತ್ತು ಎಸ್.ಅಬೂಬಕ್ಕರ್ ಆರ್ಲಪದವು ಮೊದಲಾದವರು ಸಂದರ್ಬೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ವೇಳೆ ಕೆ.ಐ.ಸಿ ಡೆವೆಲಪ್ ಮೆಂಟ್ ಕಮಿಟಿ ಪದಾಧಿಕಾರಿಗಳಾದ , ಬಾವ ಹಾಜಿ ಕೂರ್ನಡ್ಕ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಹಮೀದ್ ಮಣಿಲ, ಸಾದಿಕ್ ಹಾಜಿ ಕುಂಬ್ರ , ಎಲ್.ಟಿ ಅಬ್ದುಲ್ ರಝಾಕ್ ಹಾಜಿ , ರಶೀದ್ ಹಾಜಿ ಪರ್ಲಡ್ಕ , ಹಾರಿಸ್ ಕುಂಬ್ರ , ಬಷೀರ್ ಕೌಡಿಚ್ಚಾರ್ , ಅಬ್ದುಲ್ ರಹಿಮಾನ್ ಆಝಾದ್ ಮೊದಲಾದವರು ಉಪಸ್ಥಿತರದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು @ ನಈಮಿ ಪೋನ್ಮಲ








