Mail : info@dubaiskssf.com
fb.com/dubaiskssf | twitter.com/dubaiskssf

ಬೋಗೋಡಿ ಉರೂಸ್ ಪ್ರಾರಂಭ

ಬಿ.ಸಿ.ರೋಡು,: ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ವೌಲವಿ ದರ್ಗಾ ಶರೀಫ್ ಬೋಗೋಡಿ ಉರೂಸ್ ಕಾರ್ಯಕ್ರಮವು ಎ.10ರಿಂದ 13ರವರೆಗೆ ನಡೆಯಲಿದೆ. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉರೂಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಳ್ಳಾಲ-ಕೋಟೆಪುರ ಮುದರ್ರಿಸ್ ಹಾಜಿ ಪಿ.ಕೆ. ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಸೈಯದ್ ಅಲಿ ತಂಙಳ್ ಕುಂಬೋಳ್ ದುವಾಶೀರ್ವಚನಗೈಯುವರು. ಅಕ್ಕರಂಗಡಿ ಮುದರ್ರಿಸ್ ಪಿ.ಎಂ. ಇಬ್ರಾಹೀಂ ದಾರಿಮಿ ‘ಈಮಾನ್ ಮತ್ತು ತಖ್ವಾ’ ವಿಷಯದಲ್ಲಿ ಉಪನ್ಯಾಸಗೈಯುವರು. ಈ ಪ್ರಯುಕ್ತ ನಡೆಯುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಎ.10 ರಂದು ಮಿತ್ತಬೈಲು ಖತೀಬ್ ಖಲೀಲುರ್ರಹ್ಮಾನ್ ದಾರಿಮಿ, ಎ.11ರಂದು ಹಾಜಿ ಕೆ.ಎಂ.ಅಬೂಬಕರ್ ಮದನಿ ಹಾಗೂ ಎ.12ರಂದು ನಂದಾವರ ಖತೀಬ್ ಹಾಜಿ ಎನ್.ಎಚ್. ಆದಂ ಪೈಝಿ ಉಪನ್ಯಾಸಗೈಯುವರು. ವಿವಿಧ ದಿನಗಳಲ್ಲಿ ಸೈಯದ್ ಅಬೂಬಕರ್ ಚೆರುಕುಂಞಿ ತಂಙಳ್ ಉಳ್ಳಾಲ ಹಾಗೂ ಶೈಖುನಾ ಎಂ. ಅಲಿಕುಂಞಿ ಉಸ್ತಾದ್ ಪೊಯ್ಯತ್ತಬೈಲ್ ದುವಾಶೀರ್ವಚನಗೈಯುವರು. ಪ್ರತೀ ದಿನ ಮಗ್ರಿಬ್ ನಮಾಝ್ ಬಳಿಕ ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ವಿದ್ಯಾರ್ಥಿಗಳಿಂದ ದಫ್ ಪ್ರದರ್ಶನ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಅಬ್ದುಲ್ಲತೀಫ್ ಹಾಗೂ ಕಾರ್ಯದರ್ಶಿ ಉಮರ್ ಫಾರೂಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. @ ಕೆ ಎಚ್ ನಯೀಮಿ ಪೋನ್ಮಲ