Mail : info@dubaiskssf.com
fb.com/dubaiskssf | twitter.com/dubaiskssf

ಧಾರ್ಮಿಕ ಕಾರ್ಯಕ್ರಮ ಸಮಾರೋಪ


ಬಿ.ಸಿ.ರೋಡ್, ಮೇ 7: ದೇವ ಸಂಕಲ್ಪವಿಲ್ಲದ ಯಾವುದೇ ಸತ್ಕಾರ್ಯಗಳೂ ಅಲ್ಲಾಹನ ಬಳಿ ಸ್ವೀಕಾರ ಯೋಗ್ಯವಲ್ಲ. ಲೋಕ ಪ್ರಸಿದ್ಧಿಗಾಗಿ ನಡೆಸುವ ಪ್ರತಿಯೊಂದು ಸತ್ಕರ್ಮಗಳೂ ನಿಷ್ಫಲ ಎಂದು ಅಡ್ಯಾರ್-ಕಣ್ಣೂರು ಮುದರ್ರಿಸ್ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಪಾಣೆಮಂಗಳೂರು ಸಮೀಪದ ನೆಹರುನಗರ ನೂರುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ 8ನೆ ವಾರ್ಷಿಕೋತ್ಸವದ ಪ್ರಯುಕ್ತ ರವಿವಾರ ಇಲ್ಲಿನ ಶಾಲಾ ಮೈದಾನದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದುವಾಶೀರ್ವಚನಗೈದು ಅವರು ಮಾತನಾಡಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಾರ್ಯಕ್ರಮ ಉದ್ಘಾಟಿಸಿದರು. ನೆಹರುನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬ್ ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ ‘ಸಜ್ಜನರ ಹಾದಿ’ ಎಂಬ ವಿಷಯದಲ್ಲಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಹಾಜಿ ಎನ್.ಎಚ್. ಆದಂ ಪೈಝಿ ನಂದಾವರ, ಸೈಯದ್ ಮುಷ್ತಾಕ್ ತಂಙಳ್ ಅಕ್ಕರಂಗಡಿ, ನೆಹರು ನಗರ ಬಿಜೆಎಂ ಗೌರವಾಧ್ಯಕ್ಷ ಪಿ.ಎಂ. ಯೂಸುಫ್ ಹಾಜಿ, ಉಪಾಧ್ಯಕ್ಷ ಪಿ.ಎಂ. ಇಬ್ರಾಹೀಂ, ಪ್ರಧಾನ ಕಾರ್ಯದರ್ಶಿ ಪಿ.ಜೆ. ಇಬ್ರಾಹೀಂ, ಮಸೀದಿ ಇಮಾಂ ಕೆ.ಎಂ. ಮುಹಮ್ಮದ್ ಶರೀಫ್ ಫೈಝಿ, ಉದ್ಯಮಿ ಸಿ.ಪಿ. ಇಬ್ರಾಹೀಂ, ಬಂಟ್ವಾಳ ತಾ.ಪಂ. ಮಾಜಿ ಸದಸ್ಯ ಪಿ. ಅಬೂಬಕರ್ ನೆಹರುನಗರ ಮತ್ತಿತರರು ಉಪಸ್ಥಿತರಿದ್ದರು. ಕೆ.ಪಿ. ಫಕ್ರುದ್ದೀನ್ ದಾರಿಮಿ ಸ್ವಾಗತಿಸಿದರು. ನೂರುಲ್ ಹುದಾ ಯಂಗ್‌ಮೆನ್ಸ್ ಅಧ್ಯಕ್ಷ ಅಬ್ಬಾಸ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು