ಪುತ್ತೂರು: ನೆಲ್ಯಾಡಿ-ಕೋಲ್ಪೆ ಸಯ್ಯಿದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್‌ನಲ್ಲಿ ಎ.೪ರಿಂದ ೭ರ ತನಕ ನಡೆಯುವ’ಕೋಲ್ಪೆ ಮಖಾಂ ಉರೂಸ್’ ಉದ್ಘಾಟನೆಗೆ ಆಗಮಿಸಿದ ಕೇರಳ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ, ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿ ಶೈಖುಲ್ ಜಾಮಿಯಾ ಶೈಖುನಾ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್‌ರನ್ನು ವಾಹನ ಜಾಥಾದ ಮೂಲಕ ಉಪ್ಪಿನಂಗಡಿಯಿಂದ ಕೋಲ್ಪೆಗೆ ಬರಮಾಡಿಕೊಳ್ಳಲಾಯಿತು.
ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಮಸೀದಿಯಲ್ಲಿ ಆಲಿಕುಟ್ಟಿ ಮುಸ್ಲಿಯಾರ್‌ರನ್ನು ಸ್ವಾಗತಿಸಿ ಬಳಿಕ ವಾಹನ ಜಾಥಾದಲ್ಲಿ ಕೋಲ್ಪೆಗೆ ಬರಮಾಡಿಕೊಳ್ಳಲಾಯಿತು. ಉಪ್ಪಿನಂಗಡಿ ಮಾಲಿಕುದ್ದೀನಾರ್ ಕೇಂದ್ರ ಮಸೀದಿ ಅಧ್ಯಕ್ಷ ಹಾಜಿ ಮುಸ್ತಫಾ ಕೆಂಪಿಯವರು ಕೋಲ್ಪೆ ಜುಮಾ ಮಸೀದಿ ಗೌರವಾಧ್ಯಕ್ಷ ಅಬ್ದುಲ್ ನಾಸಿರ್ ಹೊಸಮನೆ, ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಹಾಗೂ ಪ್ರಧಾನ ಕಾರ್ಯದರ್ಶಿ ಎನ್.ಕೆ.ಅಬ್ದುಲ್ ಮಜೀದ್‌ರಿಗೆ ಧ್ವಜ ಹಸ್ತಾಂತರಿಸುವ ಮೂಲಕ ವಾಹನ ಜಾಥಾಕ್ಕೆ ಚಾಲನೆ ನೀಡಿದರು. ವಾಹನ ಜಾಥಾದಲ್ಲಿ ಕೋಲ್ಪೆ ಬಿಜೆಎಂ ಕೋಶಾಧಿಕಾರಿ ಹಾಜಿ ಬಿ.ಎಸ್.ಅಬ್ದುಲ್ಲಾ ತಂಙಳ್, ಉಪಾಧ್ಯಕ್ಷರಾದ ಎಂ.ಆದಂ, ಯು.ಕೆ.ಹಮೀದ್, ಖತೀಬರಾದ ಸಲೀಂ ಫೈಝಿ ಇರ್ಫಾನಿ, ಕೋಲ್ಪೆ ಮಿಲೇನಿಯಂ ಬ್ರದರ‍್ಸ್ ಅಧ್ಯಕ್ಷ ಅಝೀಝ್ ಎನ್.ಕೆ., ಕೋಲ್ಪೆ ಖಲಂದರ್ ಷಾ ದಫ್ ಕಮಿಟಿ ಅಧ್ಯಕ್ಷ ಕೆ.ಎಸ್.ಶರೀಫ್, ಉಪಾಧ್ಯಕ್ಷ ಜಾಬೀರ್, ಕೆ.ಎಂ.ಮಹಮ್ಮದ್ ಸಹಿತ ಹಲವು ಮಂದಿ ಪಾಲ್ಗೊಂಡಿದ್ದರು.





