Mail : info@dubaiskssf.com
fb.com/dubaiskssf | twitter.com/dubaiskssf

ಎ.17ರಿಂದ ಪುಚ್ಚಮೊಗರು ಎಲಿಯ ಮಖಾಂ ಉರೂಸ್

ಮೂಡುಬಿದಿರೆ, : ಪುಚ್ಚಮೊಗರು ಗ್ರಾಮದ ಎಲಿಯ ಜುಮಾ ಮಸೀದಿ ಸಮೀಪ ಅಂತ್ಯ ವಿಶ್ರಮ ಹೊಂದಿರುವ ಸೈಯದ್ ಡಾ.ಅಬೂಬಕರ್ ವಲಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ 2 ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಎಲಿಯ ಮಖಾಂ ಉರೂಸ್ ಎ.17ರಿಂದ 20ರವರೆಗೆ ನಡೆಯಲಿದೆ ಎಂದು ಜಮಾತ್‌ನ ಆಡಳಿತ ಕಮಿಟಿಯ ಸದಸ್ಯ ಯೂಸುಫ್ ಮಿಜಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
  ಸ್ಥಳೀಯ ಖತೀಬ ಬಹು/ ಬಿ.ಕೆ. ಅಲ್ತಾಫ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಉರೂಸ್ ಕಾರ್ಯಕ್ರಮಗಳು ನಡೆಯಲಿವೆ. ಎ.20ರಂದು ಸಮಸ್ತ ಕೇಂದ್ರ ಮುಶಾವರ ಶೈಖುನಾ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ಅವರ ನೇತೃತ್ವದಲ್ಲಿ ಸಮಾರೋಪ ಹಾಗೂ ಸೌಹಾರ್ದ ಸಂಗಮವು ನಡೆಯಲಿದ್ದು, ಅಲ್ ಹಾಜ್ ಡಾ/ ಫಾಝಿಲ್ ರಝ್ವಿ ಹಝ್ರತ್ ಕಾವಲ್ ಕಟ್ಟೆ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಟೌನ್ ಜುಮಾ ಮಸೀದಿಯ ಖತೀಬ್ ಬಹು/ಮೂಸಲ್ ಪೈಝಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ರೆಂಜಲಾಡಿ ಹುಸೈನ್ ದಾರಿಮಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ತಾಣೂರು ಮಲಪ್ಪುರಂನ ಶೈಖುನಾ ಅಸ್ಸೈಯದ್ ಫಕ್ರುದ್ದೀನ್ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ ಎಂದವರು ತಿಳಿಸಿದರು